ಕಗಪ - ಕನ್ನಡ ಗಣಕ ಪರಿಷತ್ತು
ಕನ್ನಡವನ್ನು ಗಣಕಗಳಲ್ಲಿ ಬಳಸುವುದರಲ್ಲಿ ಆಸಕ್ತಿ ಹೊಂದಿರುವ ಆಸಕ್ತರ ಗುಂಪಿನಿಂದ 1997 ರಲ್ಲಿ ಕನ್ನಡ ಗಣಕ ಪರಿಷತ್ತು ಒಂದು ಸ್ವಯಂಸೇವಾ ಸಂಸ್ಥೆಯಾಗಿ ರೂಪುಗೊಂಡಿತು. ಸಂಸ್ಥೆಯು ವಿವಿಧ ಸಂಗತಿಗಳ ಗಣಕೀಕರಣದ ಸಂದರ್ಭದಲ್ಲಿ ಕನ್ನಡವನ್ನು ಬಳಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಸಿದ್ಧಪಡಿಸಿದೆ; ಅವುಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿದೆ. ತುಂಬ ಮುಖ್ಯವಾಗಿ ಕರ್ನಾಟಕ ಸರ್ಕಾರದ ಆಡಳಿತದ ಗಣಕೀಕರಣದ ಸಂದರ್ಭದಲ್ಲೂ ಕನ್ನಡ ಭಾಷೆಯೇ ಮಾಧ್ಯಮವಾಗಿ ಮುಂದುವರೆಯಬೇಕೆಂದು ಪ್ರತಿಪಾದಿಸಿದೆ. ಈ ದಿಸೆಯಲ್ಲಿ ಒಂದು ಕನ್ನಡ ತಂತ್ರಾಂಶವು (ಸಾಫ಼್ಟ್ ವೇರ್) ನೀಡಬೇಕಾದ ಕನಿಷ್ಠ ಸೌಲಭ್ಯಗಳನ್ನು ಗುರುತಿಸಿ ಅದನ್ನು ಪ್ರಚುರಪಡಿಸಿ ಆ ಬಗ್ಗೆ ಸರ್ಕಾರದ ಗಮನವನ್ನು ಸೆಳೆದಿದೆ. ಕನ್ನಡ ಗಣಕ ಪರಿಷತ್ತು ಗಣಕ ಮತ್ತು ಕನ್ನಡಗಳಿಗೆ ಸಂಬಂಧಿಸಿದಂತೆ ಕೆಲವು ಧ್ಯೇಯೋದ್ದೇಶಗಳನ್ನಿರಿಸಿಕೊಂಡಿದೆ. ಅವುಗಳನ್ನು ಈಡೇರಿಸಿಕೊಳ್ಳುವ ದಿಸೆಯಲ್ಲಿ ಕಾರ್ಯನಿರತವಾಗಿದೆ.
KAGAPA - Kannada Ganaka Parishat
Kannada Ganaka Parishat was formed in 1997 as a voluntary organization by a group of enthusiasts interested in using Kannada on computers. The organization has developed many projects to use Kannada during the computerization of various things; it is attempting to bring them to fruition. Importantly, it has emphasized that Kannada should continue to be the medium even during the computerization of the Karnataka government's administration. In this direction, it has identified the minimum facilities to be provided by Kannada software, published it, and brought it to the government's attention. Kannada Ganaka Parishat has some goals related to computers and Kannada and is working towards achieving them.